ಕರ್ನಾಟಕ ಹಾಳಲು(state) ತನ್ನದೇ ಆದ ಎಣೆಯಿಲ್ಲದ ಬೆಡಗನ್ನು ಹೊಂದಿದೆ. ಉಳಿದ ಬಾರತದ ಬೆಡಗಿಗಿಂತ ಕರ್ನಾಟಕದ ಹೊಳಬೆಡಗು(regional fashion) ಬೇರೆಯಾಗಿದೆ.
ಈಗ ನಾವು ಕರ್ನಾಟಕದ ಒನ್ದನಿ(unique) ಸೀರೆಯುಡುಗೆ ಬಗ್ಗೆ ತಿಳಿಯೋಣ. ೫ -೬ ನೇ ನೂರ್ಗಡುವಿನಿಂದ ಇಲ್ಲಿಯವರೆಗೆ ಅಂದರೆ ೨೧ನೇ ನೂರ್ಗಡುವಿನವರೆಗೂ ಬದುಕಿದ ಒಂದು ಬಗೆ ಬಗೆಯ ಸೀರೆಯುಡುಗೆ. ಇನ್ನೊಂದು ಹುರುಳಿನಲ್ಲಿ ಹೇಳಬೇಕೆಂದರೆ ಹಳೆಕಚ್ಚೆ ಸೀರೆ ಎಂಬುದು ಕರ್ನಾಟಕದ ಹಳೆಯ ಉಳಿಕೆ. ಅದೇ ತರ ಕರ್ನಾಟಕದಲ್ಲಿ ಹಳೆಹೊತ್ತಿನ ಉಡುಗೆ, ತೊಡುಗೆ, ಒಡವೆ, ಮೂಡಿಕೆ(design), ಬಾನಿಗಳು(house hold utensils) ಇನ್ನೂ ಉಳಿದಿವೆ.
ಹಳೆಕಚ್ಚೆ ಸೀರೆಯನ್ನು ಉಟ್ಟುಕೊಂಡಾಗ ಬಲಗಾಲು ನೆರಿಗೆಗಳಿಂದ ತುಂಬಿಕೊಂಡಿರುತ್ತದೆ ಮತ್ತು ಎಡಗಾಲಿನ ಕಡೆಯಿಂದ ಬಿಗಿಯಾಗಿ ಕಚ್ಚೆ ಹಾಕುವುದರಿಂದ ಅದು ಪ್ಯಾಂಟ್ ತರಹ ಕಾಣಿಸುತ್ತದೆ.
ಹಳೆಕಚ್ಚೆ ಸೀರೆಯ ಕೆಲವು ಚಿತ್ರಗಳು
- ಚಿತ್ರ ೧, ಹಿಮ್ಮಟ್ಟಿಯ(Noble house) ಹೆಣ್ಣಿನ ಕಲ್ಕೆತ್ತನೆಯಲ್ಲಿ ಹಳೆಕಚ್ಚೆ ಸೀರೆ, ಪಟ್ಟದಕಲ್ಲು, ಕರ್ನಾಟಕ.
- ಚಿತ್ರ ೨, ಗೆಣೆಯರ ಕಲ್ಕೆತ್ತನೆಯಲ್ಲಿ ಹಳೆಕಚ್ಚೆ ಸೀರೆಯನ್ನು ಉಟ್ಟುಕೊಂಡಿರುವ ಹೆಣ್ಣು. ಪಟ್ಟದಕಲ್ಲು, ಕರ್ನಾಟಕ.
- ಚಿತ್ರ ೩, ಹಳೆಕಚ್ಚೆ ಸೀರೆಯಲ್ಲಿ ಹೆಣ್ಣಿನ ಕಲ್ಕೆತ್ತನೆ, ಬಲಗಾಲು ನೆರಿಗೆಗಳಿಂದ ತುಂಬಿಕೊಂಡಿದೆ; ಎಡಗಾಲಿನ ಕಡೆಯಿಂದ ಬಿಗಿಯಾದ ಕಚ್ಚೆ ಹಾಕಲಾಗಿದೆ.
ಚಿತ್ರ ೫ ಮತ್ತು ಚಿತ್ರ ೬ ರಲ್ಲಿ ಹಳೆಕಚ್ಚೆ ಸೀರೆಯನ್ನು ಉಟ್ಟಿರುವ ಹೆಂಗಸು.(ಸಿಂಗಾರೆವ್ವ ಕಾಣುಲಿಯಲ್ಲಿ)
ಕಡೆ ಮಾತು: ಹಳೆಕಚ್ಚೆ ಸೀರೆಯುಡುಗೆಯು ಕರ್ನಾಟಕದ ಒನ್ದನಿ(unique) ಸೀರೆಯುಡುಗೆ ಆಗಿದ್ದು. ಇನ್ನೂ ಕೂಡ ಬಳಕೆಯಲ್ಲಿ ಇದೆ. ಮುಂದಿನ ಪೀಳಿಗೆಯು ಇದನ್ನು ಉಳಿಸಿಕೊಂಡು ಹೋಗಬೇಕು, ಏಕೆಂದರೆ ಇದು ಕರ್ನಾಟ ಹೊಳಗ(empire)ದ ಹಳೆಯ ಉಳಿಕೆ.


,_750-775_dc_ca.,_vihara_sulla_parete_destra_(sud)_con_divinit%C3%A0_induiste_00.jpg)
Comments
Post a Comment